Growing your reading forest...
Growing your reading forest...
ಭೂಮಿ ಬುಕ್ಸ್ನಿಂದ ಪರಿಸರ ವಿಜ್ಞಾನ, ಪರಿಸರಶಾಸ್ತ್ರ, ಸುಸ್ಥಿರತೆ, ಸಂಸ್ಕೃತಿ ಮತ್ತು ಪ್ರಕೃತಿ ಕುರಿತಾಗಿ ಜಾಗರೂಕತೆಯಿಂದ ಆಯ್ಕೆಮಾಡಲಾದ ಪುಸ್ತಕಗಳ ಸಂಗ್ರಹವನ್ನು ಅನ್ವೇಷಿಸಿ. ಪರಿಸರದೊಂದಿಗೆ ಆಳವಾದ ನಂಟನ್ನು ಬೆಳೆಸಲು, ಜ್ಞಾನವನ್ನು ವಿಸ್ತರಿಸಲು ಮತ್ತು ಪ್ರೇರಣೆಯನ್ನು ನೀಡಲು ಈ ಕೃತಿಗಳು ರೂಪುಗೊಂಡಿವೆ.
ಪರಿಸರ, ವಿಜ್ಞಾನ-ತಂತ್ರಜ್ಞಾನ, ಕೃಷಿ ಮತ್ತು ಮಾನವಿಕ ಪುಸ್ತಕಗಳ ಪ್ರಕಟನೆಗೆ ಭೂಮಿ ಬುಕ್ಸ್ ಬದ್ಧವಾಗಿದೆ. ಭೂಮಿ ಬುಕ್ಸ್ನಲ್ಲಿ ಪ್ರಕಟವಾಗುವ ಎಲ್ಲಾ ಕೃತಿಗಳಿಗೂ ನಾಗೇಶ ಹೆಗಡೆಯವರು ಸಾರ್ವತ್ರಿಕ ಸಂಪಾದಕರಾಗಿರುತ್ತಾರೆ. ವೈಜ್ಞಾನಿಕ ನಿಖರತೆ, ಪ್ರಸ್ತುತತೆ ಹಾಗೂ ಸರಳ ನಿರೂಪಣೆ ನಮ್ಮ ಧ್ಯೇಯ.
ಪುಸ್ತಕ ಪ್ರಕಟನೆ ಎಂದರೆ ಕಾಗದಕ್ಕಾಗಿ ಗಿಡಮರಗಳ ನಾಶ ಅನಿವಾರ್ಯವಾಗುತ್ತದೆ. ಭೂಮಿ ಬುಕ್ಸ್ ತನ್ನ ಪ್ರಕಾಶನದ ಒಂದೊಂದು ಕೃತಿಯ ಬಿಡುಗಡೆಯ ಸಂದರ್ಭದಲ್ಲೂ ಒಂದೊಂದು ಗಿಡ ನೆಟ್ಟು ಮರವಾಗಿ ಬೆಳೆಸುವ ಪ್ರತಿಜ್ಞೆ ಮಾಡಿದೆ. ಭೂಮಿ ಬುಕ್ಸ್ನ ಓದುಗ ಬಳಗದ ಈ ವಿಶಿಷ್ಟ ವನನಿರ್ಮಾಣದಲ್ಲಿ ನೀವೂ ಭಾಗಿಯಾಗಬೇಕು, ಇದು ನಮ್ಮ ಆಶಯ!

ನಿರ್ವಾಹಕರು

ಮುಖ್ಯ ಸಂಪಾದಕ

ಸದಸ್ಯ